Subscribe Us

Responsive Advertisement

Advertisement

ಸಂಘ ಪರಿವಾರದೆದುರು ಮಂಡಿಯೂರಿದ ಹರಿಯಾಣ ಸರಕಾರ: ಗುರುಗಾಂವ್‌ ನಲ್ಲಿ 8 ಕೇಂದ್ರಗಳ ಜುಮುಅ ಅನುಮತಿ ರದ್ದು

 ಕೊನೆಗೂ ಸಂಘಪರಿವಾರ ಸಂಘಟನೆಗಳ ಒತ್ತಡಕ್ಕೆ ಮಣಿದ ಗುರುಗಾಂವ್ ಜಿಲ್ಲಾಡಳಿತವು, ಗುರುಗಾಂವ್‌ನಲ್ಲಿ ಶುಕ್ರವಾರದ ಪ್ರಾರ್ಥನೆಗಾಗಿ ನೀಡಲಾಗಿದ್ದ 37 ಸ್ಥಳಗಳ ಪರವಾನಿಗೆಯಲ್ಲಿ ಎಂಟು ಸ್ಥಳಗಳಲ್ಲಿನ ಪರವಾನಿಗೆಗಳನ್ನು ರದ್ದುಗೊಳಿಸಲಾಗಿದೆ.


ಹರಿಯಾಣ: ಕೊನೆಗೂ ಸಂಘಪರಿವಾರ ಸಂಘಟನೆಗಳ ಒತ್ತಡಕ್ಕೆ ಮಣಿದ ಗುರುಗ್ರಾಮ ಜಿಲ್ಲಾಡಳಿತವು, ಶುಕ್ರವಾರದ ಪ್ರಾರ್ಥನೆಗಾಗಿ ನೀಡಲಾಗಿದ್ದ ಸ್ಥಳಗಳ ಪರವಾನಿಗೆಯನ್ನು ಒಂದೊಂದಾಗಿ ರದ್ದುಗೊಳಿಸುತ್ತಿದೆ.

      ಎಂಟು ಸ್ಥಳಗಳಲ್ಲಿನ ಪರವಾನಗಿಗಳನ್ನು ಈಗ ರದ್ದುಗೊಳಿಸಲಾಗಿದೆ. 37 ಸ್ಥಳಗಳಲ್ಲಿ ಸ್ಥಳೀಯರಿಗೆ ಜುಮುವಾ ನೆರವೇರಿಸಲು ಅವಕಾಶ ನೀಡಲಾಗಿತ್ತು.

      ಬಂಗಾಳಿ ಬಸ್ತಿ ಸೆಕ್ಟರ್ 49 ಡಿಎಲ್‌ಎಫ್ ಫೇಸ್ 3ರ ವಿ ಬ್ಲಾಕ್ಸೂರತ್ ನಗರ ಫೇಸ್ 1ಖೇರ್ಕಿ ಮಜ್ರಾ ಗ್ರಾಮದ ಹೊರವಲಯದ್ವಾರಕಾ ಎಕ್ಸ್‌ಪ್ರೆಸ್‌ವೇ ಬಳಿಯ ದೌಲತಾಬಾದ್ ಗ್ರಾಮದ ಹೊರವಲಯ, ರಾಂಗಢ್ ಗ್ರಾಮದಲ್ಲಿ ಸೆಕ್ಟರ್ 68, ಡಿಎಲ್‌ಎಫ್ ಸ್ಕ್ವೇರ್ ಟವರ್, ರಾಂಪುರ್‌ ಗ್ರಾಮ ಮತ್ತು ನಾಖ್‌ರೋಲ ರಸ್ತೆ ಮುಂತಾದ ಸ್ಥಳಗಳಲ್ಲಿ ಜುಮುಅ ನಮಾಝ್‌ಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಲಾಗಿದೆ.

     ಯಾವುದೇ ಸಾರ್ವಜನಿಕ ಮತ್ತು ತೆರೆದ ಸ್ಥಳದಲ್ಲಿ ನಮಾಜ್ ಮಾಡಲು ಒಪ್ಪಿಗೆ ಅಗತ್ಯ ಗುರುಗ್ರಾಮ ಜಿಲ್ಲಾಡಳಿತ ತಿಳಿಸಿದೆ. ಯಾವುದೇ ಮಸೀದಿ, ಈದ್ಗಾ ಅಥವಾ ಖಾಸಗಿ ಅಥವಾ ಗೊತ್ತುಪಡಿಸಿದ ಸ್ಥಳದಲ್ಲಿ ನಮಾಜ್ ನಿರ್ಎಂವಹಿಸಬಹುದು ಎಂದೂ ಅದು ಹೇಳಿದೆ.

      ಭವಿಷ್ಯದಲ್ಲಿ ನಮಾಜ್ ನಿರ್ವಹಿಸುವ ಸ್ಥಳ ಗುರುತಿಸುವುದಕ್ಕಾಗಿ ಗುರ್ಗಾಂವ್ ಜಿಲ್ಲಾಧಿಕಾರಿ ಯಶ್ ಗರ್ಗ್,  ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಸಹಾಯಕ ಪೊಲೀಸ್ ಆಯುಕ್ತರು ಮತ್ತು ಧಾರ್ಮಿಕ ಸಂಘಟನೆಗಳ ಸದಸ್ಯರು ಮತ್ತು ನಾಗರಿಕ ಸಮಾಜ ಗುಂಪುಗಳ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ವಾರ್ತಾ ಮಾಧ್ಯಮ ಎಎನ್‌ಐಗೆ ಜಿಲ್ಲಾಡಳಿತ ತಿಳಿಸಿದೆ. 

      ಸ್ಥಳೀಯ ನಿವಾಸಿಗಳು ಹಾಗೂ ರೆಸಿಡೆನ್ಸ್‌ ಅಸೋಸಿಯೇಷನ್‌ಗಳ ವಿರೋಧದಿಂದಾಗಿ ಅನುಮತಿಯನ್ನು ರದ್ದುಪಡಿಸಲಾಗಿದೆ ಎಂದು ಆಡಳಿತ ವರ್ಗ ಹೇಳಿಕೊಂಡಿದೆ. ಆದರೆ ಗುರುಗಾಂವ್‌‌ ಏಕತಾ ಮಂಚ್‌ ಎಂಬ ತೀವೃ ಹಿಂದುತ್ವ ಸಂಘಟನೆ ಇದರ ಹಿಂದಿದೆ ಎಂಬುದು ಸ್ಪಷ್ಟ. ಶುಕ್ರವಾರದ ಜುಮುಅ ನಮಾಝ್ ವಿರುದ್ಧ ವ್ಯಾಪಕ ಪ್ರಚಾರಗಳನ್ನು‌, ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು. ಜನರ ಮಧ್ಯೆ ಭೀತಿ ಉಂಟು ಮಾಡುವ ಸುಳ್ಳು ಪ್ರಚಾರಗಳನ್ನು ಮಾಡುತ್ತಿದ್ದ ಏಕತಾ ಮಂಚ್ ನಮಾಜು ಮಾಡಲು ಬಂದವರ ಮೇಲೆ ಹಲ್ಲೆ ನಡೆಸಲೂ ಆಹ್ವಾನ ನೀಡಿತ್ತು.

      ಈ ಪ್ರದೇಶದಲ್ಲಿ ಸಾಕಷ್ಟು ಮಸೀದಿಗಳಿಲ್ಲದ ಕಾರಣ ಶುಕ್ರವಾರದ ಜುಮುಅ ನಮಾಝ್ ನಿರ್ವಹಿಸಲು ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ನೀಡಲಾಗಿತ್ತು. ಆದರೆ ಕಳೆದ ಒಂದು ತಿಂಗಳಿನಿಂದಲೂಹರಿಯಾಣದ ಗುರುಗಾಂವ್‌ನಲ್ಲಿ ಹಿಂದೂ ಸಂಘಟನೆಗಳ ಘೋಷಣೆಗಳ ಮಧ್ಯೆ ಮುಸ್ಲಿಮರು ಶುಕ್ರವಾರದ ಜುಮುಅ ನಮಾಝ್‌ ನಿರ್ವಹಿಸುತ್ತಿದ್ದರು. ನಮಾಝ್‌ಗಾಗಿ ಮುಸ್ಲಿಮರು ಬಂದು ಸೇರುತ್ತಿದ್ದಂತ ಇವರೂ ಅಲ್ಲಿ ಹಾಜರಾಗುತ್ತಿದ್ದರು. ನಮಾಝ್‌ ನಡೆಯುತ್ತಿದ್ದಂತೆ ಘೋಷಣೆಗಳ ಮೂಲಕ ಹಾಗೂ ಇನ್ನಿತರ ರೀತಿಯಲ್ಲಿ ತಡೆಯೊಡ್ಡಲು ಶ್ರಮಿಸುತ್ತಿದ್ದರು. ಹರಿಯಾಣದ ಗುರುಗಾಂವ್‌ನ ಪಾರ್ಕಿಂಗ್ ಪ್ರದೇಶವೊಂದರ ಬಳಿ ಈ ಘಟನೆ ನಡೆದಿರುವುದಾಗಿ ಕ್ಲಾರಿಯೋನ್‌ ಇಂಡ್ಯನ್‌ ವರದಿ ಮಾಡಿತ್ತು.

Post a Comment

0 Comments